



























ಬೆಂಗಳೂರು : ಹೊಸವರ್ಷದ ಹೊಸ್ತಿಲಲ್ಲಿ, ಮುದ ನೀಡುವ ಮಾಗಿಕಾಲದ ದಿನಗಳಲ್ಲಿ ನಾದ-ನೃತ್ಯಗಳ ವೈವಿಧ್ಯಪೂರ್ಣ ಸುಮನೋಹರ ಕಾರ್ಯಕ್ರಮಗಳಿಂದ ಮ
ನರಂಜಿಸಲಿರುವ ‘ನಿರಂತರಂ’ ಸಂಗೀತ- ನೃತ್ಯ ಸಂಸ್ಥೆಯ `ಸಂಗೀತ ಸಂಭ್ರಮ’ದ ವರ್ಣರಂಜಿತ ಕಾರ್ಯಕ್ರಮಗಳು ಬೆಂಗಳೂರಿನ ಜನತೆಗೆ ಸುಪರಿಚಿತ. ಸದಾ, ಮನಕಾನಂದ ನೀಡುವ ನವನೂತನ ಕಾರ್ಯಕ್ರಮಗಳನ್ನು ಆಯೋಜಿಸುವ `ಸಂಗೀತ ಸಂಭ್ರಮ’ ಸಂಸ್ಥೆಯ ನೇತೃತ್ವ ವಹಿಸಿರುವವರು ಪ್ರಖ್ಯಾತ ಸಂಗೀತ ವಿದುಷಿ ಡಾ. ಪುಸ್ತಕಂ ರಮಾ. ಸಮಾಜಮುಖಿ ಕಾರ್ಯಗಳಿಗೆ ಹೆಸರಾಗಿರುವ ಸ್ನೇಹಮಯಿ ವ್ಯಕ್ತಿತ್ವದ ಕರ್ನಾಟಕ ಕಲಾಶ್ರೀ ಡಾ. ರಮಾ ಸ್ಥಾಪಿಸಿ, ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ, `ಸಂಗೀತ ಸಂಭ್ರಮ’ ಸಂಸ್ಥೆಯು ಸಾರ್ಥಕ ಮೂರುದಶಕಗಳನ್ನು ಮೀರಿ ಕ್ರಮಿಸಿದ್ದು, ಕಳೆದ ಹದಿನೈದು ವರ್ಷಗಳಿಂದ, ಹಿರಿಯ ಹಾಗೂ ಉದಯೋನ್ಮುಖ ಕಲಾವಿದರಿಗೆ ನಿರಂತರವಾಗಿ ವೇದಿಕೆಯನ್ನು ಒದಗಿಸುತ್ತ ಬಂದಿರುವುದು ಸಂಗೀತ ಕಲಾವಿದೆ ರಮಾ ಅವರ ಅಸ್ಮಿತೆ. ಪ್ರತಿವರ್ಷ ತಪ್ಪದೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಈ ‘ನಿರಂತರಂ’ ಸಂಗೀತ-ನೃತ್ಯೋತ್ಸವವು ದಿನೇ ದಿನೇ ಜನಪ್ರಿಯತೆಯನ್ನು ಪಡೆಯುತ್ತಿರುವುದು ಸಂತಸದ ಸಂಗತಿ.
ಎಂದಿನಂತೆ ಈ ಬಾರಿಯೂ ಹೊಸವರ್ಷದ ಜನವರಿಯ ಮೊದಲ ದಿನದಿಂದಲೇ ದಿನಾಂಕ 01 ಜನವರಿ 2026ರ ಗುರುವಾರದಿಂದ 04 ಜನವರಿ 2026ರ ಭಾನುವಾರದವರೆಗೂ ನಾಲ್ಕು ದಿನಗಳ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
01 ಜನವರಿ 2026ರಂದು ಸಂಜೆ 5-00 ಗಂಟೆಗೆ ಉದ್ಘಾಟನೆ – ಶ್ರೀ ಚಿರಂಜೀವಿ ಸಿಂಗ್ – ಐ.ಎ.ಎಸ್. (ಕರ್ನಾಟಕ ಸರ್ಕಾರದ ನಿವೃತ್ತ ಅಡಿಷನಲ್ ಚೀಫ್ ಸೆಕ್ರೆಟರಿ) ಅನಂತರ- ಸಂಗೀತ ಸಂಭ್ರಮದ ಕಲಾವಿದರಿಂದ ಸಮೂಹ ಗೀತೆಗಳು. ವಿದ್ವಾನ್ ರಾಜ್ಯಶ್ರೀ ಜೋಸ್ಯರ್ ಶ್ರೀಕಾಂತ್ ಕರ್ನಾಟಕ ಸಂಗೀತ, ಅಮೆರಿಕೆಯ ಕುಮಾರಿ ಶ್ರೇಯಾ ಶ್ರೀರಾಮ್ ಇವರಿಂದ ಭರತನಾಟ್ಯ. ಅನಂತರ- ಕರೋಕೆ – ಸಿನಿಮಾ ಜನಪ್ರಿಯ ಹಾಡುಗಳು- ವಿದುಷಿ ದೀಪ್ತಿ ಶ್ರೀನಾಥ್, ಕುಮಾರಿ ಸಾಕ್ಷಿ ಜಗನ್ನಾಥ್ ಮತ್ತು ವಿದ್ವಾನ್ ಭಾರ್ಗವ್ ಹೆಚ್.ಸಿ. ನಂತರ- ಮೈಸೂರಿನ ಡಾ. ಕೃಪಾ ಫಡ್ಕೆ ಮತ್ತು ತಂಡದವರಿಂದ ‘ಗೀತಾಮೃತಧುಹೆ ನಮಃ’ ನೃತ್ಯ ನಾಟಕ.
02 ಜನವರಿ 2026ರಂದು ಸಂಜೆ 5-00 ಗಂಟೆಗೆ ಸಂಗೀತ ಸಂಭ್ರಮದ ಕಲಾವಿದರಿಂದ ಸಮೂಹ ಗೀತೆಗಳು. ಕರ್ನಾಟಕ ಸಂಗೀತ ವಿದುಷಿ ಹರಿಣಿ ಶ್ರೀಧರ್, ಶ್ರೀ ಸುಜಯ್ ಶಾನುಭಾಗ್ – ಕಲರ್ಸ್ ಆಫ್ ಭಕ್ತಿ – ಪಾಂಡುರಂಗ ಭಕ್ತರ ಕುರಿತು ಏಕವ್ಯಕ್ತಿ ಪ್ರದರ್ಶನ. ಅಮೇರಿಕೆಯ ಕುಮಾರಿ ಶಿಲ್ಪ ಸೇತುರಾಮನ್, ಶ್ರೀಮತಿ ಪ್ರೀತಿ ಪ್ರಸಾದ್ -ಭರತನಾಟ್ಯ.
03 ಜನವರಿ 2026ರಂದು ಬೆಳಗ್ಗೆ 9-30 ಗಂಟೆಗೆ ಸಂಗೀತ ಸಂಭ್ರಮದ ಕಲಾವಿದರಿಂದ ಸಮೂಹ ಗೀತೆಗಳು. ಕರ್ನಾಟಕ ಶಾಸ್ತ್ರೀಯ ಸಂಗೀತ- ವಿದುಷಿ ವಿಭಾ ರವೀಂದ್ರ ಮತ್ತು ವಿದುಷಿ ಪಲ್ಲವಿ ರಂಗಿನೀದಿ, ಭರತನಾಟ್ಯ- ಕುಮಾರಿ ದಿಶಾ ಯೂ., ಶ್ರೀಮತಿ ಸುಕನ್ಯ ರಾಘವ್ ಮತ್ತು ಶ್ರೀಮತಿ ಸುಪ್ರಿಯಾ ಅಶ್ವಿನ್, ಭರತನಾಟ್ಯ- ಕುಮಾರಿ ಪೂರ್ಣಾ ಪವಾರ್ ಮತ್ತು ಶ್ರೀ ಗೌರೀ ನೃತ್ಯಾಲಯ
ಸಂಜೆ 5-00 ಗಂಟೆಗೆ ಸಂಗೀತ ಸಂಭ್ರಮದ ಕಲಾವಿದರಿಂದ ಸಮೂಹ ಗೀತೆಗಳು. ಭರತನಾಟ್ಯ- ಅಭ್ಯುದಯ ಧ್ಯಾನ್ ಭೂಷಣ್, ಅಭಿಜ್ಞಾನ್ ವೇದಾಂತ್ ಭೂಷಣ್, ಅಮೇರಿಕೆಯ ಶ್ರುತಿಲಯ ಸ್ಕೂಲ್ ಆಫ್ ಡ್ಯಾನ್ಸ್, ಅಮೇರಿಕೆಯ ಪವಿತ್ರ ದಂಟು ಮತ್ತು ಡಾ. ರಕ್ಷಾ ಕಾರ್ತೀಕ್ – ತ್ಯಾಗರಾಜ ವೈಭವಂ ನೃತ್ಯರೂಪಕ
ಸ್ಥಳ: ಸೇವಾಸದನ, ಮಲ್ಲೇಶ್ವರ, ಬೆಂಗಳೂರು.
04 ಜನವರಿ 2026ರಂದು ಭಾನುವಾರ ಸಂಜೆ 3-30 ವೇದಿಕ್ ಪ್ರಾರ್ಥನೆ, 5-00 ಗಂಟೆಗೆ ’ಸಂಭ್ರಮ ಪುರಸ್ಕಾರ’ – ಪ್ರಶಸ್ತಿ ಪುರಸ್ಕೃತರು – ಶ್ರೀಮತಿ ವಸಂತ ಮಾಧವಿ, ಪ್ರಕಾಶ್ ಬೆಳವಾಡಿ, ವೇಲು ಲಹರಿ, ದಾ. ಎ.ವಿ. ಪ್ರಸನ್ನ, ಪದ್ಮಿನಿ ರವಿ, ಹೆಚ್.ಎನ್. ಸುರೇಶ, ಎ.ವಿ. ಸತ್ಯನಾರಾಯಣ, ಡಾ. ಎನ್. ಸತ್ಯಪ್ರಕಾಶ್, ಡಾ. ಸಿಂಧೂರಿ ಜಯಸಿಂಘೆ, ಮಧುಶ್ರೀ ಸೇತುರಾಮನ್, ನೀಲಾ ರಾಮಾನುಜ, ಎಸ್.ವಿ. ಗಿರಿಧರ್, ಪಿ. ಜನಾರ್ದನ್ ರಾವ್, ಜಯರಾಂ ಕಿಕ್ಕೇರಿ ಮತ್ತು ಎಂ.ಎ. ಶ್ರೀಕೃಷ್ಣನ್ .
ಮುಖ್ಯ ಅತಿಥಿಗಳು – ಶ್ರೀ ಯದುಗಿರಿ ಯತಿರಾಜ ರಾಮಾನುಜ ಜೀಯರ್ ಸ್ವಾಮಿ, ಡಾ. ಸಿ.ಎನ್. ಅಶ್ವಥ್ ನಾರಾಯಣ್ – ಶಾಸಕರು, ನಾಗಾಭರಣ, ಡಾ. ನಾಗಮಣಿ ಶ್ರೀನಾಥ್, ರೇವತಿ ಕಾಮತ್ ಮತ್ತು ಜಯಶ್ರೀ -ಕೂನ್ತುಲ್ಲಿ. ಫ್ಯೂಶನ್ ಮ್ಯೂಜಿಕ್ – ಸಂಗಮ ಸಂಭ್ರಮ- ಟಿಕೆಟ್ ಮೂಲಕ ಪ್ರವೇಶ. ಸ್ಥಳ: ಚೌಡಯ್ಯ ಮೆಮೋರಿಯಲ್ ಹಾಲ್, ವಯ್ಯಾಲಿಕಾವಲ್, ಬೆಂಗಳೂರು. ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ.
Pusthakam Ramaa: An artiste without boundaries
- Jyothi Raghuram
read more








Click here to book your tickets now


click on the image for more information
https://youtube.com/shorts/4IbW2Qx_OD4?si=EocOL7w8qXp5rW6T
Click here for more
Nirantharam 2021 : 14th and 15th April
Welcome to Sangeetha Sambhrama

The object of SANGEETA SAMBHARAM is essentially opening up the rich treasure trove of sanatana samskriti our own culture heritage especially the Dasa Sahitya and the highest human value it propagated well before any modern philosophical thought evolved.
Progeny of the renowned singer and bharatnatyam exponent Smt Ramaa, institution named as Sangeeta Sambhrama, had the sole intention of spreading the light of knowledge among people especially our youth and introducing them to the essence of life as sung in the Dasara Padagalu by the Dasa sect of 14th century and beyond. it is suprisesing to note that the youth,usually septic about such ideas, stood behind this Herculean effort and extend their co-operation.
Aimed at proliferating the essence of dasa sahitya, which is found to be mare relevant in these tumultuous days , Sangeeta Sambhrama very aptly chose the field of culture and performing arts to fructify its aspiration. Backed by the support of both connoisseurs’ and common man and Government soon the Sangeeta Sambhrama was making its foray into the field of drama, music, publication etc.
The organization which is regularly celebrating Purandarotsava, had found its new meaning this year, as this happens to be the 450th year of Purandara Jayanthi.



































































